Thursday, 11 December 2014

ನೃತ್ಯೋತ್ಸವ :- ರಂಗಪ್ರವೇಶ

ಭಾರತೀಯ ಸಾ೦ಸ್ಕ್ರುತಿಕ ಲಾಂಛನವೇ ನೃತ್ಯಭಾವ ರಾಗ, ತಾಳದ ಉತ್ಕರ್ಷವೇ ನೃತ್ಯ, ಶೃಂಗಾರ ಭಾವವೇ ಪ್ರಮುಖ ನೃತ್ಯದಲ್ಲಿ.


ಭಾರತೀಯ ವಿದ್ಯಾಭವನದಲ್ಲಿ ಕಳೆದ ಭಾನುವಾರ ಸಂಜೆ 6-30 ಕ್ಕೆ ಕುಮಾರಿ ಶ್ವೇತಾರ ಭರತನಾಟ್ಯದ ರಂಗಪ್ರವೇಶಕ್ಕೆ ನಾಂದಿಯಾಯಿತು, ಕಲಾವಿದೆ 18 ವರ್ಷಗಳಿ೦ದ ವಿದ್ವಾನ್ ನಾಗಭೂಷಣ್ ರವರ ಬಳಿ ಶಿಷ್ಯ ವೃತ್ತಿಯಲ್ಲಿ ಪಯಣ.

ಮೊದಲಿಗೆ ಗಣೇಶ ಸ್ತುತಿಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ದೊರಕಿತು, ಇದು ನಾಗಭೂಷಣ್ ರ ಕಂಠಸಿರಿಯಲ್ಲಿ ಮೂಡಿಬಂದಿತು,  ಪುಷ್ಪಾಂಜಲಿಯೊಂದಿಗೆ ಕಾರ್ಯಕ್ರಮ ಆರಂಭ. ನರ್ತಕಿ ಪುಷ್ಪಗಳೊಂದಿಗೆ ನೃತ್ಯದೇವತೆಯಾದ ನಟರಾಜನಿಗೆ ಪುಷ್ಪಗಳನ್ನು ಅರ್ಪಿಸಿ, ವಿದ್ಯಾ ಸರಸ್ಪತಿಯಾದ ಶಾರದೆಗೆ ನಮಿಸಿ, ಸಭಿಕರ ಆಶೀರ್ವಾದವನ್ನು ಬೇಡುತ್ತಾ, ಕಲಾ ವಿದ್ವಾಂಸರಿಗೆ ಪೂಜಿಸಿ, ನೃತ್ಯವನ್ನು ಆರಂಭಿಸಿದಳು.  ಅದು ರಾಗ-ನಾಟ, ಏಕತಾಳಕ್ಕೆ ಬಂದಿತವಾಗಿತ್ತು.  ಆರಂಭಿಕ ನೃತ್ಯವೂ ಮನ ಸೆಳೆಯಿತು,

ಗಣಪತಿಯ ತಂದೆಯ ಸರದಿ , ದೇವರ ದೇವ ಮಹಾದೇವ, ಓಂ ಶಿವ ಶಂಭೋ, ಸ್ವಯಂಭೊ, ಅದರ ತಾಳಕ್ಕೆ ಹೆಜ್ಜೆಯ ಗೆಜ್ಜೆಯ ಸಪ್ಪಳ ಜರುಗಿತುಇದು ರಾಗ ರೇವತಿ – ಆದಿತಾಳದಲ್ಲಿತ್ತು.

ನೃತ, ನಾಟ್ಯ ಭಾವ, ರಾಗ, ತಾಳದ   ಸಮ್ಮಿಶ್ರಣವೇ ವರ್ಣ, ಇಲ್ಲಿ ಕಲಾವಿದೆ ಶೃಂಗಾರದೊಂದಿಗೆ ಅಧ್ಬುತವಾದಂಥಹ ಪ್ರತಿಭೆಯನ್ನು ತೋರಿದಳು.  ಇದು-  ಧರ್ಮಾವತಿ ರಾಗದಲ್ಲಿದ್ದು, ಆದಿತಾಳಕ್ಕೆ ಬಂದಿತವಾಗಿದೆ. ವರ್ಣದಲ್ಲಿ ಮತ್ತಷ್ಟು ಅಭಿನಯಕ್ಕೆ ಪ್ರ‍ಾಮುಖ್ಯತೆಯನ್ನ ನೀಡಬಹುದಿತ್ತು.

ಬಹು ಪ್ರಸಿದ್ದವಾದ ದೇವರನಾಮ, ಆಡಿದನೋ ರಂಗ, ರಾಗ-ಆರಬಿ, ಆದಿತಾಳದಲ್ಲಿದ್ದುಕೃತಿಗೆ ಹೆಜ್ಜೆಯ ನಾದ ಬೆರೆತಿತ್ತುಇದು ಪುರಂದರ ದಾಸರ ಕೃತಿ ಕಲಾವಿದೆ ಉತ್ತಾರಾರ್ಧದಲ್ಲಿ ಅಭಿನಯ, ಅ೦ಗಿಕ ಭಾವನೆ ತು೦ಬಾ ಚೆ೦ದವಾಗಿತ್ತು.


ಕೀರ್ತನ : ನಾಟ್ಯದೇವತೆಯಾದ ನಟರಾಜನ ಕುರಿತಾದ “ ನಟನಂ ಹಾಡಿದ” ಎಂಬ ಪದಗಳಿಗೆ ಬಹಳ ವಿಶೇಷವಾದ ಕೃತಿಗೆ ಹೆಜ್ಜೆಯ ಗೆಜ್ಜೆಯ ನಾದ ವಿಶಿಷ್ಟವಾಗಿತ್ತು

ತಿಲ್ಲಾನ :  ಭರತನಾಟ್ಯದ ಕೊನೆಯ ಭಾಗವೇ ತಿಲ್ಲಾನ. ಎಲ್ಲ ನೃತ್ಯಗಳಿಗೆ ಕಲಶಪ್ರಾಯವಾದ ತಿಲ್ಲಾನದ ಜೀವಾಳವೇ ಲವಲವಿಕೆ, ಈ ಭಾವಾಭಿನಯವೇ ಪ್ರಧಾನವಾದಂತಹ ನೃತ್ಯದ ಭಾಗವಿದು.  ಈ ತಿಲ್ಲಾನವು ಪಾರಸ್ -ರಾಗದಲ್ಲಿದ್ದು- ಆದಿತಾಳಕ್ಕೆ ಬಂದಿತವಾಗಿದೆ.

ಮಂಗಳಂ – ನರ್ತಕಿಯು ತನ್ನ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದ ಎಲ್ಲರಿಗೂ,ಅಂದರೆ ಮೊದಲು ಭಗವಂತನಿಗೆ, ನಂತರ ಗುರುಗಳಿಗೆ, ಸಂಗೀತ ವಿದ್ವಾಂಸರಿಗೆ ಹಾಗೂ ಸಭಿಕರಿಗೆ  ಮಂಗಳಂ ಮೂಲಕ ವಂದನೆ ಸಲ್ಲಿಸಿದಳು.  ಇದರೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

ಈ ನೃತ್ಯಗಾತಿಗೆ ಪಕ್ಕವಾದ್ಯ ಸಹಕಾರವನ್ನು ನೀಡಿದ ಕಲಾವಿದರು.
ನಟುವಾಂಗ ಹಾಗೂ ಹಾಡುಗಾರಿಕೆ  ನಾಗಭೂಷಣ್, ಮೃದಂಗ – ವಿದ್ವಾನ್ ಬೆಟ್ಟ ವೆಂಕಟೇಶ್, ವಯಲಿನ್- ವಿದ್ವಾನ್ ಮಧುಸೂಧನ್, ಕೊಳಲು – ವಿದ್ವಾನ್ ನರಸಿಂಹಮೂರ್ತಿ.

ಕಾರ್ಯಕ್ರಮದಲ್ಲಿ ಖ್ಯಾತ ಪತ್ರಕರ್ತ "ಮುಳ್ಳಳ್ಳಿ ಸೂರಿ”, “ಶ್ರೀನಿವಾಸ್ ಜಿ. ಕಪ್ಪಣ್ಣ ,  ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ, “ಎಸ್. ಎಸ್. ಬಾವಿಕಟ್ಟೆ”, “ಹರಿಕುಮಾರ್”  ವೇದಿಕೆಯನ್ನು ಹಂಚಿಕೊಂಡರು.


ಎಸ್. ನ೦ಜು೦ಡ ರಾವ್

No comments:

Post a Comment