Thursday, 11 December 2014

ಗಾನ ಜಗಲಿ”

ಸುಗಮ ಸಂಗೀತ ಕ್ಷೇತ್ರಕ್ಕೆ ಒಂದು ಕಾಯಕಲ್ಪ ಕೊಡುವಲ್ಲಿ ಉಪಾಸನ ಮೋಹನ್ ಅನೇಕ ವರ್ಷಗಳಿಂದ ಪ್ರಯತ್ನಪಡುತ್ತಿದ್ದಾರೆ.

ಪ್ರತಿ ತಿಂಗಳ ಮೊದಲ ಶನಿವಾರ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ, ಕನ್ನಡದ ಪ್ರಸಿದ್ದ ಕವಿಗಳಾದ ಆನಂದ ಕಂದ, ಬಿ ಆರ್. ಲಕ್ಷ್ಮಣ್‍ರಾವ್, ಹೆಚ್. ಎಸ್. ವೆಂಕಟೇಶ ಮೂರ್ತಿ, ಎಸ್. ಲಕ್ಷ್ಮೀನಾರಾಯಣ ಭಟ್ಟ, ಸುಬ್ರಾಯ ಚೊಕ್ಕಾಡಿ, ಎಮ್.ಎನ್, ವ್ಯಾಸರಾವ್ ಮತ್ತು ರಂಜಿನಿ ಪ್ರಭುರವರು ರಚಿಸಿದ  ಗೀತೆಗಳಿಗೆ ಸಂಗೀತ ಸಂಯೋಜಿಸಿ, ಅವರ ಗೀತೆಗಳನ್ನು ಪ್ರಸಿದ್ಧ ಗಾಯಕ ಗಾಯಕಿಯರಿಂದ ಪ್ರಸ್ತುತ ಪಡಿಸುತ್ತಿದ್ದಾರೆ.  ಇದೇ ಕಳೆದ ಶನಿವಾರ ಸಂಜೆ ಶ್ರೀ ಎಸ್. ಲಕ್ಷ್ಮೀನಾರಾಯಣ ಭಟ್ಟರ ಕವಿತೆಗಳ  ಗಾಯನವನ್ನು ಅರ್ಚನ ಉಡುಪ, ಉಪಾಸನಾ ಮೋಹನ್, ಮಾಲಿನಿ ಕೇಶವಪ್ರಸದ್, ಉದಯ್ ಅ0ಕೂಲ, ಅಮೂಲ್ಯ ಶಾಸ್ತ್ರಿ, ವಿಕಾಸ್ ವಶಿಷ್ಠ, ಸ್ವಾತಿ ರಾವ್, ಹಾಗೂ ಉಪಾಸನಾ   ವಿಧ್ಯಾರ್ಥಿಗಳು ಪ್ರಸ್ತುತ ಪಡಿಸಿದರು.
           
     “ನಾನು ಕಾವ್ಯಗಳನ್ನು ಬರೆಯುತ್ತಿದ್ದೆ, ಭಾವಗೀತೆಗಳನ್ನು ಬರೆಯುವ ಅಭ್ಯಾಸ ಮಾಡಿಕೊಂಡೆ ಅನೇಕ ಟೀಕೆಗಳು ಬಂದರೂ ಬಿಡದೆ ಭಾವಗೀತೆಗಳನ್ನು ಬರೆಯುವುದು ನನ್ನ ಅಭ್ಯಾಸವಾಯಿತು.  ಅದು ನನಗೆ ಕೀರ್ತಿ ಯಶಸ್ಸನ್ನು ನೀಡಿದೆ, ಒಬ್ಬ ಕವಿಯಾಗಿ, ಕೇಳುಗರು ಇಷ್ಟಪಡುವಂತಹ ಗೀತೆಗಳನ್ನು ಬರೆದು ಕೇಳಿಸುವುದು ಪ್ರತಿಯೊಬ್ಬ ಕವಿಯ ಕರ್ತವ್ಯ, ಉಪಾಸನಾ ಮೋಹನ ಅನೇಕ ಕವಿಗಳ ಕವಿತೆಗಳಿಗೆ ಜೀವವನ್ನು ನೀಡುತ್ತಿದ್ದಾರೆ, ಹಾಗೆ ಅದನ್ನು ಗುರುತಿಸುವ ಪ್ರಯತ್ನ ಮಾಡುತ್ತಿದ್ದಾರೆ, ಎಂದು ಕವಿಶ್ರೀ ಲಕ್ಷ್ಮೀನಾರಾಯಣ್ ಭಟ್ಟರು ಅಭಿಪ್ರಾಯ ಪಟ್ಟರು.  ಕಾರ್ಯಕ್ರಮದಲ್ಲಿ ನಿರ್ಮಾಣ್   ಶೆಲ್ಟರ್  ಶ್ರೀಲಕ್ಷ್ಮೀನಾರಾಯಣ್ ಉಪಸ್ಥಿತರಿದ್ದರು.

ಮುಂದಿನ ಕವಿ ಹೆಚ್. ಎಸ್. ವೆಂಕಟೇಶ ಮೂರ್ತಿ.

ದಿನಾಂಕ 03 ಜನವರಿ       ಸ್ಥಳ-  ಕನ್ನಡ ಸಾಹಿತ್ಯ ಪರಿಷತ್
                       

ಎಸ್. ನ೦ಜು೦ಡ ರಾವ್                                                                            

No comments:

Post a Comment