minchu
Friday, 19 December 2014
Thursday, 11 December 2014
ನೃತ್ಯೋತ್ಸವ :- ರಂಗಪ್ರವೇಶ
ಭಾರತೀಯ
ಸಾ೦ಸ್ಕ್ರುತಿಕ ಲಾಂಛನವೇ ನೃತ್ಯ,
ಭಾವ
ರಾಗ, ತಾಳದ ಉತ್ಕರ್ಷವೇ ನೃತ್ಯ, ಶೃಂಗಾರ
ಭಾವವೇ ಪ್ರಮುಖ ನೃತ್ಯದಲ್ಲಿ.
ಭಾರತೀಯ
ವಿದ್ಯಾಭವನದಲ್ಲಿ ಕಳೆದ ಭಾನುವಾರ ಸಂಜೆ 6-30 ಕ್ಕೆ ಕುಮಾರಿ ಶ್ವೇತಾರ ಭರತನಾಟ್ಯದ
ರಂಗಪ್ರವೇಶಕ್ಕೆ ನಾಂದಿಯಾಯಿತು, ಕಲಾವಿದೆ
18
ವರ್ಷಗಳಿ೦ದ ವಿದ್ವಾನ್ ನಾಗಭೂಷಣ್ ರವರ ಬಳಿ ಶಿಷ್ಯ ವೃತ್ತಿಯಲ್ಲಿ ಪಯಣ.
ಮೊದಲಿಗೆ
ಗಣೇಶ ಸ್ತುತಿಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ದೊರಕಿತು, ಇದು
ನಾಗಭೂಷಣ್ ರ ಕಂಠಸಿರಿಯಲ್ಲಿ ಮೂಡಿಬಂದಿತು, ಪುಷ್ಪಾಂಜಲಿಯೊಂದಿಗೆ ಕಾರ್ಯಕ್ರಮ ಆರಂಭ.
ನರ್ತಕಿ ಪುಷ್ಪಗಳೊಂದಿಗೆ ನೃತ್ಯದೇವತೆಯಾದ ನಟರಾಜನಿಗೆ ಪುಷ್ಪಗಳನ್ನು ಅರ್ಪಿಸಿ, ವಿದ್ಯಾ
ಸರಸ್ಪತಿಯಾದ ಶಾರದೆಗೆ ನಮಿಸಿ, ಸಭಿಕರ
ಆಶೀರ್ವಾದವನ್ನು ಬೇಡುತ್ತಾ, ಕಲಾ
ವಿದ್ವಾಂಸರಿಗೆ ಪೂಜಿಸಿ, ನೃತ್ಯವನ್ನು ಆರಂಭಿಸಿದಳು. ಅದು ರಾಗ-ನಾಟ, ಏಕತಾಳಕ್ಕೆ
ಬಂದಿತವಾಗಿತ್ತು. ಆರಂಭಿಕ ನೃತ್ಯವೂ ಮನ
ಸೆಳೆಯಿತು,
ಗಣಪತಿಯ
ತಂದೆಯ ಸರದಿ , ದೇವರ ದೇವ ಮಹಾದೇವ, ಓಂ
ಶಿವ ಶಂಭೋ, ಸ್ವಯಂಭೊ, ಅದರ
ತಾಳಕ್ಕೆ ಹೆಜ್ಜೆಯ ಗೆಜ್ಜೆಯ ಸಪ್ಪಳ ಜರುಗಿತು, ಇದು ರಾಗ ರೇವತಿ – ಆದಿತಾಳದಲ್ಲಿತ್ತು.
ನೃತ, ನಾಟ್ಯ
ಭಾವ, ರಾಗ, ತಾಳದ ಸಮ್ಮಿಶ್ರಣವೇ ವರ್ಣ, ಇಲ್ಲಿ ಕಲಾವಿದೆ
ಶೃಂಗಾರದೊಂದಿಗೆ ಅಧ್ಬುತವಾದಂಥಹ ಪ್ರತಿಭೆಯನ್ನು ತೋರಿದಳು. ಇದು-
ಧರ್ಮಾವತಿ ರಾಗದಲ್ಲಿದ್ದು, ಆದಿತಾಳಕ್ಕೆ
ಬಂದಿತವಾಗಿದೆ. ವರ್ಣದಲ್ಲಿ ಮತ್ತಷ್ಟು ಅಭಿನಯಕ್ಕೆ ಪ್ರಾಮುಖ್ಯತೆಯನ್ನ ನೀಡಬಹುದಿತ್ತು.
ಬಹು
ಪ್ರಸಿದ್ದವಾದ ದೇವರನಾಮ, ಆಡಿದನೋ ರಂಗ, ರಾಗ-ಆರಬಿ, ಆದಿತಾಳದಲ್ಲಿದ್ದು, ಕೃತಿಗೆ
ಹೆಜ್ಜೆಯ ನಾದ ಬೆರೆತಿತ್ತು,
ಇದು
ಪುರಂದರ ದಾಸರ ಕೃತಿ ಕಲಾವಿದೆ ಉತ್ತಾರಾರ್ಧದಲ್ಲಿ ಅಭಿನಯ, ಅ೦ಗಿಕ ಭಾವನೆ ತು೦ಬಾ ಚೆ೦ದವಾಗಿತ್ತು.
ಕೀರ್ತನ
: ನಾಟ್ಯದೇವತೆಯಾದ ನಟರಾಜನ ಕುರಿತಾದ “ ನಟನಂ ಹಾಡಿದ” ಎಂಬ ಪದಗಳಿಗೆ ಬಹಳ ವಿಶೇಷವಾದ ಕೃತಿಗೆ
ಹೆಜ್ಜೆಯ ಗೆಜ್ಜೆಯ ನಾದ ವಿಶಿಷ್ಟವಾಗಿತ್ತು,
ತಿಲ್ಲಾನ
: ಭರತನಾಟ್ಯದ ಕೊನೆಯ ಭಾಗವೇ ತಿಲ್ಲಾನ. ಎಲ್ಲ
ನೃತ್ಯಗಳಿಗೆ ಕಲಶಪ್ರಾಯವಾದ ತಿಲ್ಲಾನದ ಜೀವಾಳವೇ ಲವಲವಿಕೆ, ಈ
ಭಾವಾಭಿನಯವೇ ಪ್ರಧಾನವಾದಂತಹ ನೃತ್ಯದ ಭಾಗವಿದು.
ಈ ತಿಲ್ಲಾನವು ಪಾರಸ್ -ರಾಗದಲ್ಲಿದ್ದು- ಆದಿತಾಳಕ್ಕೆ ಬಂದಿತವಾಗಿದೆ.
ಮಂಗಳಂ
– ನರ್ತಕಿಯು
ತನ್ನ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದ ಎಲ್ಲರಿಗೂ,ಅಂದರೆ
ಮೊದಲು ಭಗವಂತನಿಗೆ, ನಂತರ ಗುರುಗಳಿಗೆ, ಸಂಗೀತ
ವಿದ್ವಾಂಸರಿಗೆ ಹಾಗೂ ಸಭಿಕರಿಗೆ ಮಂಗಳಂ ಮೂಲಕ
ವಂದನೆ ಸಲ್ಲಿಸಿದಳು. ಇದರೊಂದಿಗೆ ಕಾರ್ಯಕ್ರಮ
ಮುಕ್ತಾಯವಾಯಿತು.
ಈ
ನೃತ್ಯಗಾತಿಗೆ ಪಕ್ಕವಾದ್ಯ ಸಹಕಾರವನ್ನು ನೀಡಿದ ಕಲಾವಿದರು.
ನಟುವಾಂಗ
ಹಾಗೂ ಹಾಡುಗಾರಿಕೆ ನಾಗಭೂಷಣ್, ಮೃದಂಗ
– ವಿದ್ವಾನ್
ಬೆಟ್ಟ ವೆಂಕಟೇಶ್, ವಯಲಿನ್- ವಿದ್ವಾನ್ ಮಧುಸೂಧನ್, ಕೊಳಲು
– ವಿದ್ವಾನ್
ನರಸಿಂಹಮೂರ್ತಿ.
ಕಾರ್ಯಕ್ರಮದಲ್ಲಿ
ಖ್ಯಾತ ಪತ್ರಕರ್ತ "ಮುಳ್ಳಳ್ಳಿ ಸೂರಿ”, “ಶ್ರೀನಿವಾಸ್ ಜಿ.
ಕಪ್ಪಣ್ಣ , ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ, “ಎಸ್.
ಎಸ್. ಬಾವಿಕಟ್ಟೆ”, “ಹರಿಕುಮಾರ್” ವೇದಿಕೆಯನ್ನು ಹಂಚಿಕೊಂಡರು.
ಎಸ್. ನ೦ಜು೦ಡ ರಾವ್
“ಗಾನ ಜಗಲಿ”
ಸುಗಮ ಸಂಗೀತ ಕ್ಷೇತ್ರಕ್ಕೆ
ಒಂದು ಕಾಯಕಲ್ಪ ಕೊಡುವಲ್ಲಿ ಉಪಾಸನ ಮೋಹನ್ ಅನೇಕ ವರ್ಷಗಳಿಂದ ಪ್ರಯತ್ನಪಡುತ್ತಿದ್ದಾರೆ.
ಪ್ರತಿ ತಿಂಗಳ ಮೊದಲ
ಶನಿವಾರ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ, ಕನ್ನಡದ ಪ್ರಸಿದ್ದ
ಕವಿಗಳಾದ ಆನಂದ ಕಂದ, ಬಿ ಆರ್. ಲಕ್ಷ್ಮಣ್‍ರಾವ್, ಹೆಚ್. ಎಸ್. ವೆಂಕಟೇಶ
ಮೂರ್ತಿ, ಎಸ್. ಲಕ್ಷ್ಮೀನಾರಾಯಣ ಭಟ್ಟ, ಸುಬ್ರಾಯ ಚೊಕ್ಕಾಡಿ, ಎಮ್.ಎನ್, ವ್ಯಾಸರಾವ್ ಮತ್ತು ರಂಜಿನಿ
ಪ್ರಭುರವರು ರಚಿಸಿದ ಗೀತೆಗಳಿಗೆ ಸಂಗೀತ
ಸಂಯೋಜಿಸಿ, ಅವರ ಗೀತೆಗಳನ್ನು ಪ್ರಸಿದ್ಧ ಗಾಯಕ ಗಾಯಕಿಯರಿಂದ ಪ್ರಸ್ತುತ
ಪಡಿಸುತ್ತಿದ್ದಾರೆ. ಇದೇ ಕಳೆದ ಶನಿವಾರ ಸಂಜೆ ಶ್ರೀ ಎಸ್.
ಲಕ್ಷ್ಮೀನಾರಾಯಣ ಭಟ್ಟರ ಕವಿತೆಗಳ ಗಾಯನವನ್ನು
ಅರ್ಚನ ಉಡುಪ, ಉಪಾಸನಾ ಮೋಹನ್, ಮಾಲಿನಿ ಕೇಶವಪ್ರಸದ್, ಉದಯ್ ಅ0ಕೂಲ, ಅಮೂಲ್ಯ ಶಾಸ್ತ್ರಿ, ವಿಕಾಸ್ ವಶಿಷ್ಠ, ಸ್ವಾತಿ ರಾವ್, ಹಾಗೂ ಉಪಾಸನಾ ವಿಧ್ಯಾರ್ಥಿಗಳು ಪ್ರಸ್ತುತ ಪಡಿಸಿದರು.
“ನಾನು ಕಾವ್ಯಗಳನ್ನು
ಬರೆಯುತ್ತಿದ್ದೆ, ಭಾವಗೀತೆಗಳನ್ನು ಬರೆಯುವ ಅಭ್ಯಾಸ ಮಾಡಿಕೊಂಡೆ ಅನೇಕ ಟೀಕೆಗಳು
ಬಂದರೂ ಬಿಡದೆ ಭಾವಗೀತೆಗಳನ್ನು ಬರೆಯುವುದು ನನ್ನ ಅಭ್ಯಾಸವಾಯಿತು. ಅದು ನನಗೆ ಕೀರ್ತಿ ಯಶಸ್ಸನ್ನು ನೀಡಿದೆ, ಒಬ್ಬ ಕವಿಯಾಗಿ, ಕೇಳುಗರು ಇಷ್ಟಪಡುವಂತಹ
ಗೀತೆಗಳನ್ನು ಬರೆದು ಕೇಳಿಸುವುದು ಪ್ರತಿಯೊಬ್ಬ ಕವಿಯ ಕರ್ತವ್ಯ, ಉಪಾಸನಾ ಮೋಹನ ಅನೇಕ ಕವಿಗಳ
ಕವಿತೆಗಳಿಗೆ ಜೀವವನ್ನು ನೀಡುತ್ತಿದ್ದಾರೆ, ಹಾಗೆ ಅದನ್ನು ಗುರುತಿಸುವ
ಪ್ರಯತ್ನ ಮಾಡುತ್ತಿದ್ದಾರೆ, ಎಂದು ಕವಿಶ್ರೀ
ಲಕ್ಷ್ಮೀನಾರಾಯಣ್ ಭಟ್ಟರು ಅಭಿಪ್ರಾಯ ಪಟ್ಟರು. ಕಾರ್ಯಕ್ರಮದಲ್ಲಿ
ನಿರ್ಮಾಣ್ ಶೆಲ್ಟರ್ ಶ್ರೀಲಕ್ಷ್ಮೀನಾರಾಯಣ್ ಉಪಸ್ಥಿತರಿದ್ದರು.
ಮುಂದಿನ ಕವಿ ಹೆಚ್. ಎಸ್.
ವೆಂಕಟೇಶ ಮೂರ್ತಿ.
ದಿನಾಂಕ 03 ಜನವರಿ ಸ್ಥಳ-
ಕನ್ನಡ ಸಾಹಿತ್ಯ ಪರಿಷತ್
ಎಸ್. ನ೦ಜು೦ಡ ರಾವ್
Subscribe to:
Comments (Atom)